ಬರುವನು ಸೂರ್ಯ ಪೂರ್ವದಿಂದ
ದಿನ ಶುರುವಾಗಿದೆ ಎಂದಿನಂತೆ
ಬೆಳಕಿನ ಜೊತೆಗೆ,
ಬೀಸುವ ಗಾಳಿಯು
ಪರಿಮಳ ಚೆಲ್ಲಲು ಮಲ್ಲಿಗೆ
ಘಳಿಗೆಯು ಸಾಗುತಿದೆ ತನ್ನಂತಾನೆ
ನಿಮಿಷಕೆ, ಗಂಟೆಗೆ, ದಿನಕೆ
ವಾರಕೆ, ತಿಂಗಳಿಗೆ, ವರ್ಷಕೆ
ಸಮಯವಾಗುವುದಿಲ್ಲ,
ನಿಲ್ಲದೆ ಸಾಗಿದೆ ಸುಮ್ಮನೆ
ಶಬ್ದ,ಮೌನ, ಬಿಸಿಲು, ನೆರಳು,
ಗಾಳಿ, ಚಳಿ, ಮಳೆ
ಎಲ್ಲವೂ ಇಲ್ಲಿ ನಿರಂತರ.
ಬದಿಗೊತ್ತಿ ಬೇರೆ ಎಲ್ಲವ,
ಬದಲಾವಣೆ ಮಾಡುವ ಕಾಯಕ
ನಿನ್ನೋಬ್ಬನಿಗೆ ಸಾಧ್ಯವೋ
oo ಮಾನವ