Thursday, 25 February 2016

munjaaneya nagu [ morning walk, evening talk??]

ಮುಂಜಾನೆಯ ಮುಗುಳ್ನಗೆ,
ಮುಸ್ಸಂಜೆಯ ಮಾತಿಗೆ,
ಕಾರಣವಾಯಿತು ನನಗೆ

ಮಾತಿನ ಮುನ್ನ ,
ಬರುವ ಮೌನ,
ಕೇಳಿ ಕಿವಿಯಲಿ ಓಡಿತು ಇಂಪಾದ ಗಾನ

ಆ ಮೌನವ ವರ್ಣಿಸಲು,
ನಾ ಪದಗಳ ಹುಡುಕುತ ಹೊರಟೆ,
ಪದಗಳ ಕಟ್ಟಿಕೊಂಡು,
ನಿನಗೆ ಪತ್ರ ಬರೆಯಲು ನಾ ಕುಳಿತೆ

ಖಾಲಿಯಾಗಿದೆ ಖಾಲಿ ಕಾಗದ,
ಸದ್ದುಮಾಡ್ತಿದೆ ಫೋನಿನ ನಾದ
ಕರೆ ಮಾಡ್ಲಾ  ನಿತ್ಯ,?
ಮೌನಕ್ಕೆ ಅಂತ್ಯ,?

ಮೌನವೇ ಶಾಶ್ವತ ಬದುಕಿನಲಿ

No comments:

Post a Comment