Sunday, 9 April 2017

ಕೊನೆ ಕೆಲವು ಮಾತು [koNe kelavu maatu]

ಕೊನೆಗಾಣುತಿದೆ ನನ್ನ ದಾರಿ
ಕೆಲವೇ ಹೆಜ್ಜೆಗಳಲಿ

ಯಾರನ್ನು ನಾ ನೆನೆಯಲಿ
ಅಪ್ಪಾ ಅಮ್ಮಾ
ಅಣ್ಣಾ ತಮ್ಮಾ
ಎಲ್ಲಾ ಈ ಜಗದ ಕಲ್ಪನೆ

ಬಂಧು-ಬಳಗ
ಸ್ನೇಹ ಪ್ರೀತಿ
ಸ್ವಾರ್ಥ ಕಥೆಯ ಶೋಧನೆ

ನಿನಗೆ ನೀನೇ
ನನಗೆ ನಾನೇ

ಖುಷಿಯ ಕಹಿಯ
ನೋವಿನ ಪಾಠವ
ಮನದಲ್ಲೇ ಬಂಧಿಸಿ ಬಂದಿರುವೆ

ಜೀವ ಎಂಬ ಬೆಳಕು
ಹೊತ್ತು, ದೂರ ಮಾಡಿದೆ ಅಳುಕು
ಹಾದಿಯಲ್ಲೇ ಬಿಟ್ಟು ಬಂದೆ
ನೆನಪು, ಚಿಂತೆ, ಜನರ ಸಂತೆ

ಆಸೆಗಳ ಕನಸಿನ ಮನೆಗೆ
ಕೀಲಿ ಸಿಗುವ ಹಾಗೆ
ಕೆಲವೇ ಹೆಜ್ಜೆ
ನನಗೆ
ಮುಗಿದು ಹೋಗುವುದು ಈ ಸುಂದರ ಸಂಜೆ

ಎಲ್ಲಾ ಬಿಟ್ಟು ಬರುವ ಈ ನಿರ್ಧಾರ
ಆಹಾ
ಮಾಡಿದೆ ಈ ದೇಹವ ಹಗುರ
ಏನು ಇಲ್ಲ ಎಂಬ ಈ ಕ್ಷಣವು
ಎಷ್ಟು ಸರಳ, ವಿರಳ


ಮೂರೇ ಹೆಜ್ಜೆ ಉಳಿದಿದೆ
ಮತ್ತೊಮ್ಮೆ ಬರುವ ಘಳಿಗೆ
ಕೇಳುತಿದೆ ಈ ಜಗದ ಬದಲಾವಣೆಗೆ...

2 comments: