ಕಂಗಳಿಗೆ ಕೆಲಸ ಕೊಟ್ಟೆ,
ರೆಪ್ಪೆಯಾಟ ನೀ ಮರೆಸಿಬಿಟ್ಟೆ
ನಿನ್ನ ಮೊಗವ ನೋಡಿ ನೋಡಿ,
ಹಗಲು ಇರಳು ಒಂದು ಗೂಡಿ
ನನ್ನ ನಿದ್ದೆ ಕದ್ದು , ಮುದ್ದು ಮಾಡಿ ಹೋಗ್ತಿದೆ
ಓ ಗೆಳತಿ ಗೆಳತಿ ಓ ಗೆಳತಿ,
ನೀನಾಗು ನನ್ನ ಸಂಗಾತಿ
ನೀ ಸಿಕ್ಕರೆ, ದುಂಬಿ ಗೆ ಹೂವೊಂದು,
ಸಿಕ್ಕಷ್ಟೆ ಆನಂದ ನನಗಂದು
ಎದೆ ಬಡಿತದ ಸದ್ದಿಗೆ,
ನೀ ಬರುವ ಹೊತ್ತಿಗೆ,
ದೂರ ಸಾಗರದಾಚೆಗೆ
ನಂಟಾಗಿ ಹೋಗಿದೆ
ಓ ಗೆಳತಿ ಗೆಳತಿ ಓ ಗೆಳತಿ,
ನೀನಾಗು ನನ್ನ ಸಂಗಾತಿ
ನೀ ಬರುವೆ ನನ್ನ ಬಳಿಗೆಂದು
ಕಾಯುತಿರುವೆ ನಾನು ಎಂದೆಂದೂ
ನಿನ್ನ ಸ್ನೇಹ ನನ್ನ ಸಾದನೆ
ನಿನ್ನ ಪ್ರೀತಿಗಾಗಿ ಈ ಶೋದನೆ
ಪ್ರೀತಿ ಇಂದ ಈ ಸ್ನೇಹವ ನೀ ಕೊಲ್ಲು,
ಸ್ನೇಹ-ಪ್ರೀತಿ ಒಟ್ಟಾಗಿ ಪಡೆಯಲು
ಓ ಗೆಳತಿ ಗೆಳತಿ ಓ ಗೆಳತಿ,
ನೀನಾಗು ನನ್ನ ಸಂಗಾತಿ
ನೀ ನುಡಿಯೆ ಸಣ್ಣ ಮಾತೊಂದು
ಜೊತೆಗಿರುವೆ ನಾನು ಎಂದೆಂದೂ
No comments:
Post a Comment