Saturday, 5 November 2016

New Life ,Every Day - (ಹೊಸ ದಿನ ,ಹೊಸ ಜೀವನ)

ಪ್ರತಿದಿನವು ಹೊಸತು
ಹಳೆಘಟನೆ ಮರೆತು
ಬದುಕಬೇಕು ನಾವು ನಮ್ಮ ಕರ್ತವ್ಯ ಅರಿತು

ನೆನ್ನೆವರೆಗು ನಾನು ಸ್ವಲ್ಪ ಕೆಟ್ಟವನಾಗಿ ಉಳಿದಿದ್ದೆ
ಅನ್ನೋ ಭಾವನೆ ಸಾಮಾನ್ಯವಾಗಿ ಎಲ್ಲರಿಗು ಇರುತ್ತೆ
ನಾಳೆಯಿಂದ ಒಳ್ಳೆಯವನಾಗಿ ಇರ್ತೀನಿ ಅನ್ನೋ ನಿರ್ಧಾರ
ಜೀವಂತ , ಶಾಶ್ವತ , ನಿರಂತರ

ಈ ದಿನವು ನನ್ನದು
ಒಳ್ಳೆದು , ಕೆಟ್ಟದ್ದು
ನೆನ್ನೆ ನಾಳೆಗೆ ಬಿಟ್ಟಿದ್ದು
ಅಂತ ಬದುಕಿದಾಗ
ನಿನಗೆ ಸಿಗುವ ಆನಂದ , ನೆಮ್ಮದಿ
ಆ ದಿನದಲಿ ನೀ ಗಳಿಸಿದ ಆಸ್ತಿ-ಪಾಸ್ತಿ
ಎಲ್ಲರಿಗು  ಶ್ರೀಮಂತರಾಗುವ ಬಯಕೆ
ಕಾಸು ಸಿಗದೆಹೋಗಬಹುದೆಂಬ ಭಯಕೆ
ನಾಳೆಯೆಂಬ ನೆಪವ ತೆಗೆದು
ಓಡಿಹೋಗಿ ಮತ್ತದೆ ಬಾವಿಗೆ ಬಿದ್ದು
ಈಜುಬಾರದೆ ಒದ್ದಾಡಿ ಉಸಿರುಕಟ್ಟಿ ಸಾಯ್ತಿದ್ದಾರೆ.

ಪ್ರತಿದಿನವು ಹೊಸತು
ಹಳೆಘಟನೆ ಮರೆತು
ಬದುಕಬೇಕು ನಾವು ನಮ್ಮ ಕರ್ತವ್ಯ ಅರಿತು

------------------------------------------------------------------------------- KV

No comments:

Post a Comment