Monday, 19 November 2018

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕನ್ನಡದಿಂದಲೇ ಮೊದಲ ನುಡಿ
ಕನ್ನಡದಲ್ಲಿಯೇ ನಮ್ಮ ಕೊನೆಯ ನುಡಿ

ಸಾವಿರ ಭಾಷೆಯ ಕಲಿತರೇನು,
ಈ ಪುಟ್ಟ ಎದೆಯೊಳಗೆ ಬಡಿಯುವ ಬಡಿತವೇ ನನ್ನ
ಕನ್ನಡ

ನುಡಿಯಲು ಕನ್ನಡ ,
ಮನದುಯ್ಯಾಲೆಯು ಬಾನೆತ್ತರಕೆ.
ಮೌನದಲು ಕನ್ನಡವಿಹುದೇನೋ!, ಕಂಡ ಜ್ಞಾನಿ ಯಾರು?

ಕನ್ನಡ ಕೇಳುವ ಕಿವಿಯೇ,
ನಿನ್ನ ಪುಣ್ಯದ ಪಾಲುದಾರ ನಾನು.
ಸಾವಿರ ವರ್ಷದ ತಪಸ್ಸಿಗೆ, ಆ ಶಿವ ಕೊಟ್ಟನಾ ಈ ವರವನು?

ರಾಶಿ ರಾಶಿ ಅತ್ಯಮೂಲ್ಯ ಲೋಹಗಳಿಂದಾಯಿತು
ಕನ್ನಡದ ಅಕ್ಷರಗಳು.
ರಚನೆಯ ಶೇಷ?, ಅಗೋ ಆ ನೀಲಿ ಬಾನಿನ
ನಕ್ಷತ್ರಗಳು.

ಕನ್ನಡದಿ ಏನೇ ಬರೆದರೂ, ಅದಾಗುವುದು ಕವಿತೆ.
ಕನ್ನಡವ ಓದಿದರೆ, ಅದಾಗುವುದು ಸೊಗಸಾದ ಹಾಡು.
ಕನ್ನಡವ ನೆನೆದರೆ ಸಾಕು, ನಾ ಮಾಡಿ ಬರುವೆ ತಾಯಿ ಗರ್ಭಕೆ ಪ್ರವೇಶ.

ತಾಯಿಗಿಂತ ಮಿಗಿಲಾದವರು ಯಾರೂ ಇಲ್ಲ,
ಕನ್ನಡವೇ ತಾಯಿಯಾಗಿ ಎದುರಿಗೆ ಬಂದಾಗ,
ಕೂಗುವೆವು ನಾವು
ಜೈ ಭುವನೇಶ್ವರಿ! , ಜೈ ಕನ್ನಡಾಂಬೆ!
✊✊✊

No comments:

Post a Comment