ಬರುತಿಹುದು ಹೊಸ ಬೆಳಕು
ದ್ವಂಸ ಮಾಡಲು ಕತ್ತಲೆಯ ಗೋಡೆಯ
ತಪ್ಪು, ಪಾಪ , ಪ್ರಾಯಶ್ಚಿತ್ತದಿ
ಆವರಿಸಿರಲು, ಗೋಡೆಯ ಬಣ್ಣವೇ ಕಗ್ಗತ್ತಲು
ತಲೆ ಎತ್ತಿ ನಿಲ್ಲು ಬಾ ಎನ್ನುತ್ತಿದೆ
ಬಿರುಕಿನಲಿ ಬಂದ ಬೆಳಕಿನ ರೇಖೆಯೊಂದು
ಜೊತೆ ಇದ್ದರೂ ಕಾಣದ ಗೆಳೆಯರು,
ಕಾಣಬಹುದೇನೋ ಅದೊಂದು ಸಣ್ಣ ಬೆಳಕಿನಲಿ
ಕಾರ್ಮೋಡದಿಂದ ಬಿದ್ದ ಮಳೆ ಹನಿಯು
ಕಾಣಬಂದಿತು ಸಣ್ಣ ಮಿಂಚಿನ ಅಂಚಿನಲಿ
ಒಗೆಯಬಹುದೇ ತೆಗೆದು, ಆ ಮಳೆಯ ಹನಿಯು,
ಹರಿಸದೆ ಉಳಿದ ಈ ಕಣ್ಣೀರನು
ಭಯದ ಕತ್ತಲು , ಸೂರ್ಯ ಬರುವನು ಗೋಡೆ ಒಡೆಯಲು
ಹೊಸ ದಿನ , ಹೊಸ ಘಳಿಗೆಯಂದೇ
ಬರುತಿದೆ ಮಿಂಚಿನ ಲೇಪದ ಕಿರಣ
ಒಮ್ಮೆ ಸರಿಸಿಬಿಡು ಈ ಕಗ್ಗತ್ತಲೆಯ,
ತಿರುಗಿ ನೋಡುವ ಹಾಗೆ ಬದುಕುವೆ
ನನ್ನೀ ಉಳಿದ ಬದುಕನು.
===============
barutihudu hosa belaku
dwamsa maadalu kattaleya godeya
tappu, paapa , prayaschittadi
aavarisiralu , godeya banneve kaggattallu
tale yetti nillu baa yennutide
birukinali banda belakina rekheyondu
jothe iddaru kaanada geleyaru
kaanabahudeno adondu sanna belakinali
kaarmodadinda bidda maleyu
kaanabanditu sanna mincha anchinali
ogeyabahude tegedu aa maleya haniyu
harisade ulisida ee kanniranu
bhayada kattalu, soorya baruvane gode odeyalu
hosa dina , hosa galigeyande
barutide minchina lepada kirana
omme sarisibidu ee kaggattaleya
tirugi noduva haage badukuve
ninnee ulida badukanu.
No comments:
Post a Comment