Saturday, 3 December 2016

MASK < no peace>

ಕರೆದ ಕಹಿ ದನಿಗೆ
ಮುರಿದ ಮುಗುಳುನಗೆ
ಬಣ್ಣ ಮನದೊಳಗೆ
ಶಾಂತಿ ಅರೆಗಳಿಗೆ

ಭಾವನೆಯ ಬಳ್ಳಿ
ಮನದ ಮರಕೆ ಅಂಟಿಕೊಳ್ಳಲಿ
ಸಮಾಜದ ಬಿರುಗಾಳಿ
ಮಾಡದಿರಲಿ ದಾಳಿ

ನಾಟಕದ ಬದುಕಿಗೆ ವಿದಾಯ
ಹೇಳುವವರಿಗೆ ಮಾಡಿ ಸಹಾಯ
ತೋರಲಿ ಜನರ ವೈವಿದ್ಯತೇ
ನೆಲೆಸಲಿ ಶಾಂತಿ ಸೌಹಾರ್ದತೆ

--English

kareda kahi danige
Murida mugulunage
Banna manadolage
Shanti aRe galige

Bhaavaneya balli
Manada marake antikollali
Samaajada birugaali
Maadadirali daali

Naatakada badukige vidaaya
Heluvavarige maadi sahaaya
Torali janara vai vidyate
Nelesali shanti souhaardate

Saturday, 5 November 2016

New Life ,Every Day - (ಹೊಸ ದಿನ ,ಹೊಸ ಜೀವನ)

ಪ್ರತಿದಿನವು ಹೊಸತು
ಹಳೆಘಟನೆ ಮರೆತು
ಬದುಕಬೇಕು ನಾವು ನಮ್ಮ ಕರ್ತವ್ಯ ಅರಿತು

ನೆನ್ನೆವರೆಗು ನಾನು ಸ್ವಲ್ಪ ಕೆಟ್ಟವನಾಗಿ ಉಳಿದಿದ್ದೆ
ಅನ್ನೋ ಭಾವನೆ ಸಾಮಾನ್ಯವಾಗಿ ಎಲ್ಲರಿಗು ಇರುತ್ತೆ
ನಾಳೆಯಿಂದ ಒಳ್ಳೆಯವನಾಗಿ ಇರ್ತೀನಿ ಅನ್ನೋ ನಿರ್ಧಾರ
ಜೀವಂತ , ಶಾಶ್ವತ , ನಿರಂತರ

ಈ ದಿನವು ನನ್ನದು
ಒಳ್ಳೆದು , ಕೆಟ್ಟದ್ದು
ನೆನ್ನೆ ನಾಳೆಗೆ ಬಿಟ್ಟಿದ್ದು
ಅಂತ ಬದುಕಿದಾಗ
ನಿನಗೆ ಸಿಗುವ ಆನಂದ , ನೆಮ್ಮದಿ
ಆ ದಿನದಲಿ ನೀ ಗಳಿಸಿದ ಆಸ್ತಿ-ಪಾಸ್ತಿ
ಎಲ್ಲರಿಗು  ಶ್ರೀಮಂತರಾಗುವ ಬಯಕೆ
ಕಾಸು ಸಿಗದೆಹೋಗಬಹುದೆಂಬ ಭಯಕೆ
ನಾಳೆಯೆಂಬ ನೆಪವ ತೆಗೆದು
ಓಡಿಹೋಗಿ ಮತ್ತದೆ ಬಾವಿಗೆ ಬಿದ್ದು
ಈಜುಬಾರದೆ ಒದ್ದಾಡಿ ಉಸಿರುಕಟ್ಟಿ ಸಾಯ್ತಿದ್ದಾರೆ.

ಪ್ರತಿದಿನವು ಹೊಸತು
ಹಳೆಘಟನೆ ಮರೆತು
ಬದುಕಬೇಕು ನಾವು ನಮ್ಮ ಕರ್ತವ್ಯ ಅರಿತು

------------------------------------------------------------------------------- KV

Thursday, 14 July 2016

Painting freestyle


ಕಂಗಳಿಗೆ ಕೆಲಸ ಕೊಟ್ಟೆ,
ರೆಪ್ಪೆಯಾಟ ನೀ ಮರೆಸಿಬಿಟ್ಟೆ
ನಿನ್ನ ಮೊಗವ ನೋಡಿ ನೋಡಿ,
ಹಗಲು ಇರಳು ಒಂದು ಗೂಡಿ
ನನ್ನ ನಿದ್ದೆ ಕದ್ದು , ಮುದ್ದು ಮಾಡಿ ಹೋಗ್ತಿದೆ

ಓ ಗೆಳತಿ ಗೆಳತಿ ಓ ಗೆಳತಿ,
ನೀನಾಗು ನನ್ನ ಸಂಗಾತಿ
ನೀ ಸಿಕ್ಕರೆ, ದುಂಬಿ ಗೆ ಹೂವೊಂದು,
ಸಿಕ್ಕಷ್ಟೆ ಆನಂದ ನನಗಂದು


ಎದೆ ಬಡಿತದ ಸದ್ದಿಗೆ,
ನೀ ಬರುವ ಹೊತ್ತಿಗೆ,
ದೂರ ಸಾಗರದಾಚೆಗೆ
ನಂಟಾಗಿ  ಹೋಗಿದೆ

ಓ ಗೆಳತಿ ಗೆಳತಿ ಓ ಗೆಳತಿ,
ನೀನಾಗು ನನ್ನ ಸಂಗಾತಿ
ನೀ ಬರುವೆ ನನ್ನ ಬಳಿಗೆಂದು
ಕಾಯುತಿರುವೆ ನಾನು ಎಂದೆಂದೂ

ನಿನ್ನ ಸ್ನೇಹ ನನ್ನ ಸಾದನೆ
ನಿನ್ನ ಪ್ರೀತಿಗಾಗಿ ಈ ಶೋದನೆ
ಪ್ರೀತಿ ಇಂದ ಈ ಸ್ನೇಹವ ನೀ ಕೊಲ್ಲು,
ಸ್ನೇಹ-ಪ್ರೀತಿ ಒಟ್ಟಾಗಿ  ಪಡೆಯಲು

ಓ ಗೆಳತಿ ಗೆಳತಿ ಓ ಗೆಳತಿ,
ನೀನಾಗು ನನ್ನ ಸಂಗಾತಿ
ನೀ ನುಡಿಯೆ ಸಣ್ಣ ಮಾತೊಂದು
ಜೊತೆಗಿರುವೆ ನಾನು ಎಂದೆಂದೂ



Tuesday, 8 March 2016

Dabbaakondh malko [ ದಬ್ಬಾಕೊಂಡ್ ಮಲ್ಕೋ]

bye macha , good night :)....,

ದಬ್ಬಾಕೊಂಡ್ ಮಲ್ಕೋ
ಬೆಡ್‌ಶೀಟು ಎಳ್ಕೋ
ಕನಸೊಂದು ಬೀಳ್ತದೆ
ಕಾಣದೆ ಇರೋದ್ ಕಾಣ್ತದೆ

ಆಗ್ದಿದ್ ನೆಲ್ಲ , ಆಗೋದ್ ನೆಲ್ಲ ಕನಸಲ್ಲಿ ಮಾಡ್ಕೋ
ಟೆಂಪೋರರೀ ಮೆಮೋರೀಲೀ 1 ಕಾಪೀ ಹಿಡ್ಕೊ
ಮೆತ್ತಗಿರೋ ಮನಸು ನಂದು, ಗಟ್ಟಿಯಾಗಿ ಕೂಗಿದೆ
ಪ್ರೀತಿಯಲ್ಲಿ ಫೈಲ್ ಆಗಿ ಸಾಯೋಕ್ ಹೋಗ್ತಿದ್ದೆ

ಒಂದ್ ಒಳ್ಳೆ ಜೀವ
ಕಾಪಾಡ್ದಿದ್ರೆ ನಾ ಶವ
ಧನ್ಯವಾದ ನಿಮಗೆಲ್ಲ
ಮತ್ತೆ ಸಾಯೋಕ್ ಬರೋದಿಲ್ಲ

ಕೆಲ್ಸ ತುಂಬಾ ಜೋರು 
ಓಡಾಡೋಕೆ ಕಾರು
ಮಕ್ಳು ಮರಿ ನಂಗಿಲ್ಲ
ಸಾರೀ, ಮದ್ವೆ ಕೂಡ ಆಗಿಲ್ಲ

ಅಂತೂ ಇಂತೂ ಮದ್ವೆ ಆಗಿ 
ನೆಮ್ಮದಿ ಇಂದ ತಲೆ ಬಾಗಿ 
ಸಮಾಜದಲ್ಲಿ ಬಾಳ್ತಿದ್ದೆ
ಅಷ್ಟರಲ್ಲೇ ಆಶ್ಚರ್ಯ ಮೈಕ್ ಹಾಕೊಂಡ್ ಕರೀತಿದೆ


ಫೇಲ್ಯೂರ್ ಆದ ಲವ್'ಉ ನನ್ನ ಕಣ್ಣ ಮುಂದೆ
ಹೆಂಡ್ತಿ-ಮಕ್ಳು ಇಬ್ರೂ ನನ್ನ ಬೆನ್ನ ಹಿಂದೆ
ಪ್ರೀತಿ ಮಾಯೆ ಎಂದು ನಾನು ಪ್ರೀತಿ ಹಿಂದೆ ಹೊರಟೆ
ಪೊಲೀಸ್ ಕೇಸ್'ಉ ಆಯ್ತು,ಜನರು ಬಾರಿಸ್ಬಿಟ್ರು ತಮಟೆ

ಜಾಡಸಿ ಒದ್ರು
ಹೆಂಡತಿ ಅಲ್ಲ 

ಸಾರೀ

ನನ್ನ ಅಮ್ಮ 
ಅಂದ್ರು "ಏಳೋ ಮಂಕು ತಿಮ್ಮ,
ಗಂಟೆ ಎಂಟು ಆಯ್ತು
ನೀನು ಕಾಲೇಜ್ ಗೆ ಹೋಗಲ್ವ?"



---KV


Sunday, 6 March 2016

ಲೋಕದ ಭಯಕೆ ಬದುಕಬೇಕೆ,? [ LOKADA BHAYAKE...]

ಲೋಕದ ಭಯಕೆ ಬದುಕಬೇಕೆ,?
ಬಾವಿಯ ಕಪ್ಪೆ ಆಗ್ತೀಯಾ ಏಕೆ,?

ನಿಂದು ಅಂತ ನಿನಗೆ ಒಂದು ಲೈಫ್'ಉ ಕೊಟ್ಟ ದೇವ್ರು,
ನಿನ್ನ ಲೈಫ್'ಉ ನಮಗೆ ಸ್ವಂತ ಅಂತ ಅವ್ರೆ ಇವ್ರು
ಬಾಳು ನಿನ್ನ ಬದುಕಲಿ
ಜಾಗ ಇಲ್ಲ ನಮಗಲ್ಲಿ
ಇದ ನೀ ಅರಿತರೇ
ಈ ಜಗತ್ತೇ ನಿಂದು ದೊರೆ

ಲೋಕದ ಭಯಕೆ ಬದುಕಬೇಕೆ,?
ಬಾವಿಯ ಕಪ್ಪೆ ಆಗ್ತೀಯಾ ಏಕೆ,?

ಆಸೆಗಳ ಅಂಗಿಯಲ್ಲಿ ಹುಡುಕ್ತಾರೆ ಕಪ್ಪು ಕಲೆ
ಅವ್ರ ಮಾತು ಕೇಳ್ತಾ ಹೋದ್ರೆ ಆಗ್ತೀಯಾ ಬೆತ್ತಲೆ
ರೆಕ್ಕೆಯ ಕಟ್ಟಿ
ಮೇಲಕ್ಕೆ ಹಾರು
ಸೋತರೂ ಸೇರ್ತಿಯ
ನೆಮ್ಮದಿಯ ಸೂರು

ಲೋಕದ ಭಯಕೆ ಬದುಕಬೇಕೆ,?
ಬಾವಿಯ ಕಪ್ಪೆ ಆಗ್ತೀಯಾ ಏಕೆ,?

ಸುಡ್ತಾ ಇದ್ರು ಸೂರ್ಯ ಎಂದೂ ಕೂಲ್ ಡ್ರಿಂಕ್ಸ್ ಕುಡ್ಯಲ್ಲ
ಮೆತ್ತಗಿರೋ ಮಣ್ಣಲ್ಲಿ ನೀನು ಮಡ್ಕೆ ಮಾಡೋಕ್ ಆಗಲ್ಲ
ದೂರದಲ್ಲಿರೋ ದೀಪ ನಾ
ಹಚ್ಚಿ ಮಾಡು ಅಂತ್ಯ ನಾ
ಗುರಿಮುಟ್ಟು ಓ ಚಿನ್ನ

ಲೋಕದ ಭಯಕೆ ಬದುಕಬೇಕೆ,?
ಬಾವಿಯ ಕಪ್ಪೆ ಆಗ್ತೀಯಾ ಏಕೆ,?
ಲೋಕದ ಭಯಕೆ ಬದುಕಬೇಕೆ,?
ಬಾವಿಯ ಕಪ್ಪೆ ಆಗ್ತೀಯಾ ಏಕೆ,?



--KV

Thursday, 25 February 2016

munjaaneya nagu [ morning walk, evening talk??]

ಮುಂಜಾನೆಯ ಮುಗುಳ್ನಗೆ,
ಮುಸ್ಸಂಜೆಯ ಮಾತಿಗೆ,
ಕಾರಣವಾಯಿತು ನನಗೆ

ಮಾತಿನ ಮುನ್ನ ,
ಬರುವ ಮೌನ,
ಕೇಳಿ ಕಿವಿಯಲಿ ಓಡಿತು ಇಂಪಾದ ಗಾನ

ಆ ಮೌನವ ವರ್ಣಿಸಲು,
ನಾ ಪದಗಳ ಹುಡುಕುತ ಹೊರಟೆ,
ಪದಗಳ ಕಟ್ಟಿಕೊಂಡು,
ನಿನಗೆ ಪತ್ರ ಬರೆಯಲು ನಾ ಕುಳಿತೆ

ಖಾಲಿಯಾಗಿದೆ ಖಾಲಿ ಕಾಗದ,
ಸದ್ದುಮಾಡ್ತಿದೆ ಫೋನಿನ ನಾದ
ಕರೆ ಮಾಡ್ಲಾ  ನಿತ್ಯ,?
ಮೌನಕ್ಕೆ ಅಂತ್ಯ,?

ಮೌನವೇ ಶಾಶ್ವತ ಬದುಕಿನಲಿ

Tuesday, 23 February 2016

kannada rap lyrics [kanglish ಮೊದಲ ತಪ್ಪಿಗೆ ಕ್ಷಮೆ ಇರಲಿ]

ಗುರು, ಒಂದ್ ಹಾಡ್ ಹಾಡು ಗುರು..



ಹಾಡೋಕ್ ನನಗೆ ಬರಲ್ಲ
ಟ್ರೈ ಮಾಡೋದ್ ಬಿಡಲ್ಲ
ಸಕ್ಸೆಸ್ ಆದ್ರೆ,
ಮತ್ತೊಂದು ಹಾಡ್ತೀನಿ
ಫೇಲ್ಯೂರ್ ಆದ್ರೆ,
ಮತ್ತೆ ಮತ್ತೆ ಹಾಡ್ತೀನಿ
ಟ್ಯೂನ್ ಯಾಕೆ ಕೇಳ್ತೀಯ
ಲಿರಿಕ್ಸ್ ಸ್ವಲ್ಪ ನೋಡ್ತೀಯ


ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ ,ಅರ್ಥ ಆಯ್ತಾ, ಅರ್ಥ ಆಯ್ತಾ ಓ ಹೊ
ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ ,ಅರ್ಥ ಆಯ್ತಾ, ಅರ್ಥ ಆಯ್ತಾ ಆ ಹ



ಗುರು, ನೀನ್ ಲವ್ ಮಾಡಿದ್ಯಾ ಗುರು..


ನಾನ್ ಲವ್ ಮಾಡಿಲ್ಲ
ಲವ್ ಮಾಡೋದ್ ತಪ್ಪಲ್ಲ
ಕಲರ್ ಕಲರ್ ಹುಡ್ಗೀರು
ಅಣ್ಣ್ ತಮ್ಮಂದಿರ ಲವರ್'ಉ

ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ ,ಅರ್ಥ ಆಯ್ತಾ, ಅರ್ಥ ಆಯ್ತಾ ಓ ಹೊ
ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ ,ಅರ್ಥ ಆಯ್ತಾ, ಅರ್ಥ ಆಯ್ತಾ ಆ ಹ


ಗುರು, ನಿಮ್ ಹುಡ್ಗಿ ಯಾವ ಕಲರ್ ಗುರು...


ಎ ಎ ಎ ಎ

ಅವ್ಳ ಕಲರ್ ಬಗ್ಗೆ ಹೇಳ್ಬೇಕಂದ್ರೆ
ನೀನ್ ನನ್ ಹಿಸ್ಟರೀ ಕೇಳ್ಬೇಕು
ವನ್ಸ್ ಅಪಾನ್ ಆ ಟೈಮ್ ನನಗೆ ಜಾಂಡಿಸ್ ಬಂದಿತ್ತು
ಮೊಸ್ರನ್ನ ಕೊಟ್ಟ್ರೂನೂ ಚಿತ್ರಾನ್ನ ಅನ್ನಿಸ್ತಿತ್ತು
ಅಂತ ಟೈಮ್ ಅಲ್ಲೂ ಅವ್ಳ ಕಲರ್ ,
ಹಪ್ಪಿದೆಂಟ್ ವೈಟ್ ಗೆ ತಕ್ಕರ್ ಕೊಡೊ ಹಾಗ್ ಇರ್ತಿತ್ತು



ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ ,ಅರ್ಥ ಆಯ್ತಾ, ಅರ್ಥ ಆಯ್ತಾ ಓ ಹೊ
ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ, ಅರ್ಥ ಆಯ್ತಾ ,ಅರ್ಥ ಆಯ್ತಾ, ಅರ್ಥ ಆಯ್ತಾ ಆ ಹ




---KV